ನಿನ್ನ ಕೊನೆವರೆಗೂ ಮನದಲಿ ನಾನು ಇರಬಹುದೆ
ವಿಶೇಷವಾಗಿದೆ ಈ ಬಡಪಾಯಿಯ ಖುಷಿಯ ಈ ಮಿಡಿತ
ನಿನ್ನ ನೋಡುತ ನಾ ಮೂಕ ವಿಸ್ಮಿತ
ಮೋಹಗೊಳ್ಳುತ ನಾ ಮೂಕ ವಿಸ್ಮಿತ
ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೆ
ಭಾವ ಬುದ್ದಿ ಹಂಚುವಾಗ ಜೀವವೇ ಹೂವು
ನೀನು ಬಂದು ಹೋದಲೆಲ್ಲ ಪ್ರೀತಿಯ ಕಾವು
ಕಾಡುವಂತ ಈ ಮೋಹ ದಾಹಗಳ ಕೇಳಲೇಬೇಕೆ
ಮೂಡಿ ಬಂದ ಈ ವಿವಿದ ವೇದನೆಯ ತಾಳಲೆಬೇಕೆ
ಮಾತನಾಡುತ ನಾನು ಮೂಕ ವಿಸ್ಮಿತ
ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೆ
ನಿನ್ನ ಕೊನೆವರೆಗೂ ಮನದಲಿ ನಾನು ಇರಬಹುದೆ
ಏಕೋ ಏನೋ ನಿಲ್ಲುತೇನೆ ಕನ್ನಡಿಯ ಮುಂದೆ
ಆದರೂನು ಅಲ್ಲಿ ಕೂಡ ನಿನ್ನನೆ ಕಂಡೆ
ನೂರು ಬಾರಿ ಬರೆದು ಹರಿದಿರುವ ಕಾಗದಾ ನಾನು
ಒಮ್ಮೆ ಬಂದು ಈ ತೆರೆದ ಹೃದಯವನು ಓದುವೆ ಏನು
ಪ್ರೀತಿ ಮಾಡುತ ನಾನು ಮೂಕ ವಿಸ್ಮಿತ
ನಿನ್ನ ಮನೆವರೆಗೂ ಜೊತೆಯಲಿ ನಾನು ಬರಬಹುದೆ
ನಿನ್ನ ಕೊನೆವರೆಗೂ ಮನದಲಿ ನಾನು ಇರಬಹುದೆ
ವಿಶೇಷವಾಗಿದೆ ಈ ಬಡಪಾಯಿಯ ಖುಷಿಯ ಈ ಮಿಡಿತ
ನಿನ್ನ ನೋಡುತ ನಾ ಮೂಕ ವಿಸ್ಮಿತ
ಮೋಹಗೊಳ್ಳುತ ನಾ ಮೂಕ ವಿಸ್ಮಿತ